ದೃಷ್ಟಿ ದೋಷವುಳ್ಳವರಿಗಾಗಿ ತೆರೆದಿರುವ ಕಲಿಕಾ ಸಂಪನ್ಮೂಲ ಕೇಂದ್ರ (ಎಲ್. ಆರ್. ಸಿ. ವಿ. ಸಿ.) / ಪ್ರಾಜೆಕ್ಟ್ ದೃಷ್ಟಿ


ದೃಷ್ಟಿದೋಷವುಳ್ಳ ಗ್ರಂಥಾಲಯ ಸದ್ಯಸರಿಗಾಗಿ ಗ್ರಂಥಾಲಯದಲ್ಲಿರುವ ಈ ಕೇಂದ್ರದ ಮೂಲಕ ಸಹಾಯಕ ತಂತ್ರಜ್ಞಾನವನ್ನು ಅಳವಡಿಸುತ್ತಿದೆ. ಈ ವಿಭಾಗದಲ್ಲಿ ಪೂರ್ಣ ಪ್ರಮಾಣದ ಹಾಗೂ ಮಧ್ಯಮ ಪ್ರಮಾಣದ ದೃಷ್ಟಿದೋಷವುಳ್ಳವರಿಗಾಗಿಯೇ ಆಧುನಿಕ ಗಣಕಯಂತ್ರೋಪಕರಣ ಹಾಗೂ ಆಧುನಿಕ ತತ್ರಾಂಶವನ್ನು ಅಳವಡಿಸಲಾಗಿದೆ. ಕುವೆಂಪು ಇನ್ಸ್ಟಿಟ್ಯೂಟ್ ಆಫ್ ಕನ್ನಡ ಸ್ಟಡೀಸ್, ಯೂನಿವರ್ಸಿಟಿ ಕಾಲೇಜ್ ಆಫ್ ಫೈನ್ ಆರ್ಟ್ಸ್ ಮತ್ತು ಯೂನಿವರ್ಸಿಟಿ ಗ್ರಾಜುಯೇಟ್ ಲೈಬ್ರರಿ ಗ್ರಂಥಾಲಯದಲ್ಲಿ ಸಣ್ಣ ಪ್ರಮಾಣದಲ್ಲಿ ಇದೇ ರೀತಿಯ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಇಲ್ಲಿರುವ ಅಕ್ಷರ ವರ್ಧಕವು ಕಡಿಮೆ ದೃಷ್ಟಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಇಲ್ಲಿ ದೃಷ್ಟಿದೋಷವುಳ್ಳವರು ಸಾಧಾರಣ ಮಾದರಿಯ ಪಠ್ಯ ಪುಸ್ತಕಗಳನ್ನು ಓದಲು ಅನುಕೂಲ ಮಾಡಿಕೊಡಲಾಗಿದೆ. ಆಧುನಿಕ ಗಣಕಯಂತ್ರೋಪಕರಣ, ಆಧುನಿಕ ತತ್ರಾಂಶಗಳಾದ ಸಾರಾ ಬುಕ್ ರೀಡರ್, ಏಂಜೆಲ್ ಬುಕ್ ರೀಡರ್, ಪ್ಲೆಕ್ಸ್ ಟಾಕ್, ಪ್ರಿಕ್ಸ್ಮಾ ಮತ್ತು ಟಾಪ್ಜ್ ಮ್ಯಾಗ್ನಿಫೈಯರ್ಗಳು, ಬೋನಿಟಾ ಮೌಸ್, ಮ್ಯಾಜಿಕ್ ಕೀ ಬೋರ್ಡ್, ಬ್ರೈಲ್ ಪ್ರಿಂಟರ್, ಗ್ರಾಫಿಕ್ ಎಂಬೋಸರ್, ಜೆಎಡಬ್ಲ್ಯುಎಸ್ ಟಾಕಿಂಗ್ ಸಾಫ್ಟ್ವೇರ್, ಡಕ್ಸ್ಬರಿ ಬ್ರೈಲ್ ಅನುವಾದ ತಂತ್ರಾಂಶ, ಕುರ್ಜ್ವೀಲ್ ಓಸಿಆರ್ ಓದುವಿಕೆ ತಂತ್ರಾಂಶ, ರಿಫ್ರೆಶ್ ಮಾಡಬಹುದಾದ ಬ್ರೈಲ್ ಪ್ರದರ್ಶನ ಮತ್ತು ಸಿಡಿ ರೀಡರ್ ಅನ್ನು ಹಾಗೂ ಸಹಾಯಕ ತಂತ್ರಜ್ಞಾನವನ್ನು ಅಳವಡಿಸಿ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳ ಏಳಿಗೆಗೆ ಗ್ರಂಥಾಲಯವು ಶ್ರಮಿಸುತ್ತಿದೆ.

LRCVH  
  • ದೃಷ್ಟಿಹೀನರಿಗಾಗಿಯೇ ಸ್ಟೇಟ್-ಆಫ್-ಆರ್ಟ್ ಸಹಾಯಕ ತಂತ್ರಜ್ಞಾನಗಳು.
  • ಜಾಸ್ ಟಾಕಿಂಗ್ ಸಾಫ್ಟ್ವೇರ್, ಡಕ್ಸ್ಬರಿ ಬ್ರೈಲ್ ಭಾಷಾಂತರ ತಂತ್ರಾಂಶ, ಸಾರಾ ಬುಕ್ ರೀಡರ್, ಏಂಜೆಲ್ ಬುಕ್ ರೀಡರ್, ಪ್ಲೆಕ್ಸ್ ಟಾಕ್, ಸಿಡಿ ರೀಡರ್
  • ಝೂಮೆಕ್ಸ್, ಝೂಮ್ ಟ್ವಿಕ್ಸ್ ಮತ್ತು ಟೋಪಝ್, ಪ್ರಿಸ್ಮಾ ರೀಡರ್ಸ್, ಕಡಿಮೆ ದೃಷ್ಠಿ ಹೀನರಿಗಾಗಿ ಬೋನಿಟಾ ಮೌಸ್.
  • ಮ್ಯಾಜಿಕ್ ಕೀ-ಬೋರ್ಡ್, ಪದೇ ಪದೇ ರಿಫ್ರೆಶ್ ಮಾಡಲು ಆಗುವಂಥ ಬ್ರೈಲ್ ಡಿಸ್ಪ್ಲೇ, ಬ್ರೈಲ್ ಕೀ-ಬೋರ್ಡ್
  • ಬ್ರೈಲ್ ಪ್ರಿಂಟರ್, ಗ್ರಾಫಿಕ್ಸ್ ಎಂಬೋಸರ್
  • ಇಮೇಲ್, ಇಂಟರ್ನೆಟ್ ಸರ್ಚ್ ಫೆಸಿಲಿಟಿ
  • ಈ-ಜರ್ನಲ್ಸ್ ಮತ್ತು ಈ-ಬುಕ್ಸ್ ಗಳ ಅಡಚಣೆ ರಹಿತ ಬಳಕೆ